Sunday, July 24, 2011

ನನ್ನ ಹೃದಯ



ಎಂದೋ ಬೀಗ ಜಡಿದ ಗೇಟಿನ
ಮುಂದಿರುವ ಅಂಚೆ ಪೆಟ್ಟಿಗೆ
ಈ ನನ್ನ ಹೃದಯ.

ಬಂದು ಬೀಳುತಿವೆ
ಅದೆಸ್ಟೋ ಲೆಕ್ಕವಿಲ್ಲದಷ್ಟು ಪತ್ರಗಳು
ಓದುವವರಿಲ್ಲ, ಉತ್ತರಿಸುವವರಿಲ್ಲ.

ಪತ್ರಗಳಿಗಾಗಿ ಕಾದು,
ಅನುಭವಿಸುತ್ತಿದ್ದ ವೇದನೆ
ಈ ಅಂಚೆ ಪೆಟ್ಟಿಗೆಗಸ್ಟೇ ಗೊತ್ತು.

ಕಾಯುವಿಕೆಯು ಬೇಸರವ ಮೂಡಿಸಲು,
ಹಿಂದೆ ಮುಂದೆ ನೋಡದೆ,
ಬೀಗ ಜಡಿದು,
ಕೀ ಬೀಸಾಡಿಬಿಟ್ಟೆ.

ಇಂದು ಅದೆಷ್ಟು ಹುಡುಕಾಡಿದರೂ ಸಿಗುತ್ತಿಲ್ಲ.
ಗೇಟಿನ ಕೀ ಅಲ್ಲ.
ನನ್ನ ಹೃದಯ.

ಅಂಚೆ ಪೆಟ್ಟಿಗೆಯ ಮಾಲೀಕ,
ಶಿವಪ್ರಕಾಶ್

Image Courtesy: Sam [AllOfUsAreLost]


Share/Save/Bookmark

Thursday, July 14, 2011

ವೈರಾಗಿ... ನಾನಲ್ಲ..



ಜನ ಜಾತ್ರೆಯ ನಡುವೆ
ಕಳೆದುಹೊಗಬೇಕೆನಿಸುವುದು..
ಎಲ್ಲವನೊಮ್ಮೆ ದೂರಕೆ ತಳ್ಳಿ
ದೂರವಾಗಬೇಕೆನಿಸುವುದು..

ಮಾತುಗಾರರ ನಡುವೆ,
ಮೌನವಾಗಿರಬೇಕೆನಿಸುವುದು..
ಮಾತಲ್ಲದ ಮಾತಲ್ಲಿ
ಮಾತು ಹೇಳಬೇಕೆನಿಸುವುದು...

ಹರಿವ ನೀರನೊಮ್ಮೆ
ನಿಲಿಸಿ ಕೇಳಬೇಕೆನಿಸುವುದು
ನಿಂತ ನೀರನ್ನೊಮ್ಮೆ
ಕದಡಿ ಕೇಳಬೇಕೆನಿಸುವುದು..

ಈ ಜೀವನಕೆ
ಅರ್ಥವೇ ಇಲ್ಲವೆನಿಸುವುದು..
ಅರ್ಥ ಹುಡುಕುತಿರುವವರ
ಕಂಡು ಮರುಕ ಹುಟ್ಟುತಿಹುದು..

ಒಮ್ಮೊಮ್ಮೆ ಎಲ್ಲವು
ಬೇಕೆನಿಸುವುದು..
ಬೇಕೆನಿಸುವುದೆಲ್ಲಾ
ಬರಿ ಮಾಯೆ ಎಂದು ಮನ ಎಚ್ಚೆರಿಸುತಿಹುದು...

ಇಂತಿ,
ವೈರಾಗಿ... ನಾನಲ್ಲ..
ಶಿವಪ್ರಕಾಶ್
--

ಕೊನೆಯದಾಗಿ. ಡಿವಿಜಿ ಯವರ ಈ ಸಾಲು ನಿಮಗಾಗಿ...
"ವ್ಯರ್ಥವೀ ಜೀವನದ ಬಡಿದಾಟವೆನ್ನದಿರು | ಅರ್ಥವಹುದದು ನಿನಗೆ ಪೂರ್ಣದರ್ಶನದಿಂ"

Share/Save/Bookmark

Tuesday, July 5, 2011

KRS Backwater

ನಾವು ಸ್ನೇಹಿತರೆಲ್ಲ ಸೇರಿ ಮೊನ್ನೆ ಭಾನುವಾರ ಕೆ.ಅರ್.ಎಸ್ ಬ್ಯಾಕ್-ವಾಟರ್ ಗೆ ಹೋಗಿದ್ದೆವು. ಇಲ್ಲಿ ಕೆ.ಅರ್.ಎಸ್ ಡ್ಯಾಮ್ ನಲ್ಲಿ ಮುಳುಗಡೆಯಾಗಿದ್ದ ಹನ್ನೆರಡನೆ ಶತಮಾನದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನವನ್ನು ಎರಡು ವರ್ಷಗಳಿಂದ ಸ್ಥಳಾಂತರಿಸಲಾಗುತ್ತಿದೆ. ಈ ಸ್ಥಳ ತುಂಬ ಸುಂದರವಾಗಿದೆ.

ಅಲ್ಲಿ ಸೆರೆಹಿಡಿದ ಸುಂದರ ಚಿತ್ರಗಳು...


























ಇನ್ನೂ ನಮ್ಮೆಲ್ಲರ ತುಂಟಾಟವನ್ನು ನೋಡಲು ಕೆಳಗಿನ ಚಿತ್ರವನ್ನು ಕ್ಲಿಕ್ಕಿಸಿ. ಇದು ಆಲ್ಬಮ್ Folder ಗೆ ಕೊಂಡೊಯ್ಯುವುದು...

Addadiddi Part-2



ಸ್ಥಳದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ..
http://dasaramysore.in/backwater.php


Share/Save/Bookmark